ನಾಳೆ ಮಧು ಬಂಗಾರಪ್ಪಗೆ ಅದ್ದೂರಿ ಸ್ವಾಗತ: ಬೈಕ್ ರ್‍ಯಾಲಿ, ಅಭಿನಂದನೆ

ನಾಳೆ ಮಧು ಬಂಗಾರಪ್ಪಗೆ ಅದ್ದೂರಿ ಸ್ವಾಗತ: ಬೈಕ್ ರ್‍ಯಾಲಿ, ಅಭಿನಂದನೆ

ಶಿವಮೊಗ್ಗ:  ಕರ್ನಾಟಕ ಕಾಂಗ್ರೆಸ್ ಸಮಿತಿಯು ಹಿಂದುಳಿದ  ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಿದ್ದು, ಅವರು ಶನಿವಾರ ಸೆ. 24 ರಂದು ನಗರಕ್ಕಾಗಮಿಸುವರು ಮತ್ತು ಕಾಂಗ್ರೆಸ್ ಭವನದಲ್ಲಿ ಅವರಿಗೆ ಅಭಿನಂದನಾ ಸಮಾರಂಭವನನ್ನು 10:30 ಕ್ಕೆ ಏರ್ಪಡಿಸಲಾಗಿದೆ ಎಂದು ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಎಂಆರ್‌ಎಸ್ ವೃತ್ತಕ್ಕೆ ಆಗಮಿಸಲಿರುವ ಮಧು ಅವರನ್ನು ಪಕ್ಷದ ಕಾರ್‍ಯಕರ್ತರು ಬೈಕ್ ರ್‍ಯಾಲಿ ಮೂಲಕ ಕಾಂಗ್ರೆಸ್ ಭವನಕ್ಕೆ ಕರೆತರುವರು. ನೂರಕ್ಕು ಹೆಚ್ಚು ಬೈಕ್‌ಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಆನಂತರ ಪಕ್ಷದ ವತಿಯಿಂದ ಮತ್ತು ವಿವಿಧ ಘಟಕಗಳ ವತಿಯಿಂದ ಅವರನ್ನು ಗೌರವಿಸಲಾಗುವುದು ಎಂದರು.

 ಕಳೆದ ವಾರ ಮಧು ಅವರನ್ನು ಈ ಘಟಕಕ್ಕೆ ನೇಮಕ ಮಾಡಲಾಗಿದೆ. ಅಧ್ಯಕ್ಷರಾದ ನಂತರ ಜಿಲ್ಲೆಗೆ ಮೊದಲ ಭೇಟಿ ಇದಾಗಿದೆ. ಜೊತೆಗೆ ಇಲ್ಲಿ ಅನೇಕ ಪ್ರಮುಖ ವಿಚಾರಗಳನ್ನು ಅವರು ಪ್ರಕಟಿಸಲಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸುವುದರ ಜೊತೆಗೆ ಹಿಂದುಳಿದ ವರ್ಗಗಳ ಮತವನ್ನು ಗಟ್ಟಿಗೊಳಿಸುವುದು, ಜನರ ಸಮಸ್ಯೆ ಪರಿಹರಿಸುವುದು, ಮೊದಲಾದ ಸವಾಲಿದೆ. ಆದರೆ ಮಧು ಅವರು ಜನರ ನಾಡಿಮಿಡಿತವನ್ನು ಬಲ್ಲವರಾಗಿದ್ದಾರೆ. ರಾಜಕೀಯದಲ್ಲಿ ಅನುಭವಿಕರಾಗಿದ್ದಾರೆ. ಜನರ ಕಷ್ಟ-ಸುಖಗಳ ಅರಿವಿದೆ. ಈ ಹಿನ್ನೆಲೆಯಲ್ಲಿ ಅವರು ಈ ಹುದ್ದೆಯನ್ನು ಸುಲಭವಾಗಿ ನಿರ್ವಹಿಸುವರು  ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ವಿಜಯಕುಮಾರ್, ರಮೇಶ್ ಶಂಕರಘಟ್ಟ, ಜಿ. ಡಿ. ಮಂಜುನಾಥ, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಣ, ಬೊಮ್ಮನಕಟ್ಟೆ ಮಂಜುನಾಥ, ದೀಪಕ್ ಸಿಂಗ್, ಶ್ಯಾಮಸುಂದರ್ ಎಸ್ ಪಿ ಶೇಷಾದ್ರಿ ಮೊದಲಾದವರು ಉಪಸ್ಥಿತರಿದ್ದರು.