ನಟಿ ರಮ್ಯಾ, ತಾವೇಕೆ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಟಿ ರಮ್ಯಾ, ತಾವೇಕೆ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಟಿ ರಮ್ಯಾ ಅವರ ಮದುವೆ ಬಗ್ಗೆ ಕುತೂಹಲ ಇರುವಂತೆಯೇ ಅವರ ಮುಂದಿನ ಸಿನಿಮಾ ಬಗ್ಗೆಯೂ ಇದೆ. ಬಹು ವರ್ಷಗಳ ಬ್ರೇಕ್  ನ ಬಳಿಕ ಮತ್ತೆ ಚಿತ್ರರಂಗಕ್ಕೆ ಪದಾಪರ್ಣೆ ಮಾಡುತ್ತಿದ್ದಾರೆ.  

ಒಂದೋ ನೀವು ಸಂತೋಷವಾಗಿರಬೇಕು, ಇಲ್ಲವೆ ಮದುವೆಯಾಗಬೇಕು. ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಾನು ಖುಷಿಯಾಗಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಾಗಾಗಿ ನಾನು ಮದುವೆಯಾಗಿಲ್ಲ ಎಂದಿದ್ದಾರೆ ನಟಿ .

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದು ಬಹಳ ಮುಖ್ಯ. ಶಿಕ್ಷಣವೂ ಸಹ ಬಹಳ ಮುಖ್ಯ. ನಿಮಗೆ ಸರಿ ಎನಿಸುವಂಥಹಾ ಸಂಗಾತಿ ಸಿಕ್ಕರೆ ಖಂಡಿತ ಮದುವೆಯಾಗಿ ಆರಾಮವಾಗಿರಿ. ಇಲ್ಲವಾದರೆ ಯಾವುದೇ ಒತ್ತಡಕ್ಕೆ ಸಿಲುಕಿ ಮದುವೆ ಆಗಲು ಹೋಗಬೇಡಿ. ಪ್ರೀತಿಯ ಹೊರತಾಗಿ ಇನ್ನಾವುದೇ ಕಾರಣಕ್ಕೂ ಮದುವೆ ಆಗದಿರಿ ಎಂಬ ಸಲಹೆಯನ್ನು ನಟಿ ರಮ್ಯಾ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. 

 ಮದುವೆ  ಬಗ್ಗೆ ರಮ್ಯಾ ಮಾತ್ರ ಈವರೆಗೆ  ಬಾಯಿಬಿಟ್ಟಿರಲಿಲ್ಲ. ಆದರೆ ಈಗ  ಮಾತನಾಡಿದ್ದಾರೆ. ಬಿಜಿಎಸ್ ವಿದ್ಯಾ ಸಮೂಹದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ರಮ್ಯಾಗೆ ಅಲ್ಲಿನ ವಿದ್ಯಾರ್ಥಿಯೊಬ್ಬ ನೀವು ಮದುವೆ ಯಾವಾಗ ಆಗ್ತೀರ ಎಂಬ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ರಮ್ಯಾ ಸೂಕ್ತ ಉತ್ತರವನ್ನೇ ನೀಡಿದ್ದಾರೆ.

 ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ರಮ್ಯಾರನ್ನು, ದೇವಕಿಶೋರ್ ಎಂಬ ವಿದ್ಯಾರ್ಥಿ, ನಿಮ್ಮ ಮದುವೆ ಯಾವಾಗ ಮೇಡಂ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ರಮ್ಯಾ, ನೀವು ಸಿಂಗಲ್ಲಾ? ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ಮದುವೆ ಯಾಕೆ ಆಗ್ಬೇಕು ಎಂದು ನನಗೆ ಅರ್ಥ ಆಗ್ತಿಲ್ಲಪ್ಪ ಎಂದಿದ್ದಾರೆ.

 ಆಗ ಆ ವಿದ್ಯಾರ್ಥಿ ಅದೇ ನಮಗೂ ಬೇಕಾಗಿರೋದು, ನೀವು ಮದುವೆ ಆಗ್ಬೇಡಿ ಎಂದಿದ್ದಾನೆ. ಅದಕ್ಕೆ ನಟಿ ರಮ್ಯಾ, ಮದುವೆ ಆಗಬಾರದಲ್ವ, ಅದೇ ಬೆಸ್ಟ್, ನನಗೆ ಗೊತ್ತು ಎಂದಿದ್ದಾರೆ. ರಮ್ಯಾರ ಉತ್ತರಕ್ಕೆ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿದ್ದಾರೆ.  

  ನನಗೆ ಗೊತ್ತಿತ್ತು ನೀವು ಈ ಪ್ರಶ್ನೆ ಕೇಳೇ ಕೇಳುತ್ತೀರೆಂದು.  ಎಂದಿದ್ದಾರೆ.

   ನಟಿ ರಮ್ಯಾ, ಇದೀಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದು, ಡಾಲಿ ಧನಂಜಯ್ ನಟಿಸುತ್ತಿರುವ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ನಟನೆಗೆ ಕಾಲಿಡುತ್ತಿದ್ದಾರೆ. ಹಾಸ್ಟೆಲ್ ಹುಡುಗರು ಸಿನಿಮಾದ ಅತಿಥಿ ಪಾತ್ರದಲ್ಲಿಯೂ ನಟಿಸುತ್ತಿದ್ದಾರೆ."