ದೊಡ್ಡವರ ಮೈತ್ರಿ, ಸ್ಥಳೀಯ ನಾಯಕರಿಗೆ ಸಂಕಟ
ಬಿಜೆಪಿ - ಜೆಡಿಎಸ್ ದೋಸ್ತಿ ತಂದಿಟ್ಟ ಸಂದಿಗ್ಧತೆ

ಲೊಕಸಭೆ ಚುನಾವಣೆ ಸಮೀಪಿಸು ತ್ತಿರುವಾಗಲೇ ರಾಜಕೀಯ ದ್ರುವೀಕರಣ ಆರಂಭವಾಗಿದ್ದು, ಸಿದ್ಧಾಂತ ಮತ್ತು ಪಕ್ಷ ನಿಷ್ಠೆಗಳೂ ಮರೀಚಿಕೆಯಾಗುತ್ತಿವೆ. ಜೀವನ ಪರ್ಯಂತ ಯಾವ ಪಕ್ಷ ಮತ್ತು ಸಿದ್ಧಾಂತಗಳ ವಿರುದ್ಧ ಹೋರಾಟ ಮಾಡಿದ್ದರೊ ಅವರೊಂದಿಗೇ ಒಂದಾಗಿ ಚುನಾವಣೆ ಎದುರಿಸುವ ಸಂದಿಗ್ಧ ಪರಿಸ್ಥಿತಿ ಹಲವರಿಗೆ ಎದುರಾಗಿದೆ. ಪಕ್ಷಗಳ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಮಾಡಿಕೊಳ್ಳುವ ಒಪ್ಪಂದ ಮತ್ತು ಒಳ ಒಪ್ಪಂದಗಳು ತಳಮಟ್ಟದ ನಾಯಕರುಗಳಿಗೆ ಮುಜುಗರ ತರುವಂತಹ ಸನ್ನಿವೇಶ ರಾಜಕೀಯದಲ್ಲಿ ಸಾಮಾನ್ಯ ಸಂಗತಿ ಎಂಬುದು ಮತ್ತೆ ಸಾಬೀತಾಗಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಜೆಡಿಎಸ್‌ನಲ್ಲಿ ಬಿಜೆಪಿ ವಿರೋಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸೈದ್ಧಾಂತಿ ಕವಾಗಿ ಬಿಜೆಪಿಯನ್ನು ವಿರೋಸುವ ಜೆಡಿಎಸ್‌ನ ಅನೇಕ ನಾಯಕ ರುಗಳು ಈಗಾಗಲೇ ಒಂದು ಕಾಲು ಹೊರಗಿಟ್ಟಿ ದ್ದಾರೆ ಎಂದು ಆ ಪಕ್ಷದ ಮೂಲ ಗಳು ತಿಳಿಸಿವೆ.
ಮಲೆ ನಾಡು ಮತ್ತು ಮಧ್ಯಕರ್ನಾಟಕದಲ್ಲಿ ಒಂದು ಕಾಲದಲ್ಲಿ ಜನತಾ ಪರಿವಾರ ಭದ್ರ ನೆಲೆಯಾಗಿತ್ತು. ಸಮಾಜವಾದಿ ಹೋರಾಟ ಮತ್ತು ಸೋಷಿಯಲಿಸ್ಟ್ ಪಕ್ಷದ ಪ್ರಭಾವ ಗಟ್ಟಿಯಾಗಿದ್ದ ಈ ಭಾಗದಲ್ಲಿ ಜಾತ್ಯತೀತ ನಿಲುವಿನ ಜನತಾ ಪಕ್ಷಕ್ಕೆ ವ್ಯಾಪಕ ಬೆಂಬಲ ಕೂಡಾ ಇತ್ತು. ಜನತಾ ಪಕ್ಷದ ಅವಯಲ್ಲಿ ಮಲೆನಾಡು ಮತ್ತು ಮಧ್ಯಕರ್ನಾಟಕದಲ್ಲಿ ಅನೇಕ ಶಾಸಕರು ಗೆದ್ದು ಬಂದಿದ್ದರು. ಜೆ.ಹೆಚ್. ಪಟೇಲ್, ಗೋವಿಂದೇಗೌಡ, ಕೆ.ಹೆಚ್.ಶ್ರೀನಿವಾಸ್, ಜಿ.ಬಸವಣ್ಯಪ್ಪರಂತಹ ಪ್ರಭಾವಿ ನಾಯ ಕರು ತಮ್ಮದೇ ಆದ ಛಾಪು ಮೂಡಿಸಿ ದ್ದರು. ಜನತಾ ಪಕ್ಷ ಒಡೆದು ಹೋಳಾದ ಮೇಲೆ ಜಾತ್ಯತೀತ ಜನತಾದಳ ಒಂದು ಪಕ್ಷ ವಾಗಿ ಮಲೆ ನಾಡು ಹಾಗೂ ಮಧ್ಯ ಕರ್ನಾಟಕ ದಲ್ಲಿ ಅಂತಹ ಶ್ರೇಯಸ್ಸು ಕಾಣದಿದ್ದರೂ ಎಂ.ಜೆ.ಅಪ್ಪಾಜಿ ಗೌಡ, ಶಾರದಾ ಪೂರ್ಯ ನಾಯ್ಕ, ಎಸ್.ಎಲ್. ಧರ್ಮೇಗೌಡ, ವೈಎಸ್.ವಿ.ದತ್ತಾ, ಬಿ.ಬಿ ನಿಂಗಯ್ಯ, ಶಿವಪ್ಪ, ಮಧು ಬಂಗಾರಪ್ಪ ಅವರಂತಹ ನಾಯಕರ ವೈಯಕ್ತಿಕ ವರ್ಚಸ್ಸಿನ ಕಾರಣಕ್ಕೆ ಜೆಡಿಎಸ್ ಬೇರು ಗಳು ಗಟ್ಟಿಯಾಗಿದ್ದವು.
ನೆಲೆಕಳೆದುಕೊಂಡು ಜೆಡಿಎಸ್:
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಮಲೆನಾಡು ಹಾಗೂ ಮಧ್ಯಕರ್ನಾಟಕದಲ್ಲಿ ಹೀನಾಯವಾದ ಪ್ರದರ್ಶನ ನೀಡಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾರದಾ ಪೂರ್ಯನಾಯ್ಕ್ ಅವರು ವೈಯಕ್ತಿಕ ವರ್ಚಸ್ಸು ಮತ್ತು ಕಾಂಗ್ರೆಸ್‌ನಲ್ಲಿ ದುರ್ಬಲ ವ್ಯಕ್ತಿಗೆ ಟಿಕೆಟ್ ನೀಡಿದ್ದ ಕಾರಣಕ್ಕೆ ಗೆಲುವು ಸಾಸಿದ್ದಾರೆ. ಅವರ ಗೆಲುವಿನಿಂದ ಈ ಭಾಗದಲ್ಲಿ ಜೆಡಿಎಸ್ ಭಾವುಟ ಹಾರುವಂತಾ ಯಿತು. ಇನ್ನು ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೆಡಿಎಸ್ ಫಲಿತಾಂಶ ದಯನೀಯವಾಗಿತ್ತು.
ಸ್ಥಳೀಯ ನಾಯಕರ ಸಂಕಟ
ಬಿಜೆಪಿಯ ಸಿದ್ಧಾಂತವನ್ನು ಒಪ್ಪದೇ ಜಾತ್ಯತೀತ ನಿಲುವಿನ ನಂಬಿಕೆ ಇಟ್ಟಿದ್ದ ಅನೇಕರಿಗೆ ಈ ಹೊಂದಾಣಿಕೆ ಇಕ್ಕಟ್ಟಿಗೆ ಸಿಲುಕಿಸಿದೆ. ಜೀವನವಿಡೀ ಬಿಜೆಪಿಯನ್ನು ಬೈಯ್ದುಕೊಂಡೇ ಬಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೂ ಈ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕಿ ಶಾರದಾಪೂರ್ಯನಾಯ್ಕ್ ಅವರು ಸೈದ್ಧಾಂತಿಕವಾಗಿಯೂ ಬಿಜೆಪಿಯನ್ನು ಒಪ್ಪಿಕೊಂಡವರಲ್ಲ. ನಾಲ್ಕು ತಿಂಗಳ ಹಿಂದೆ ಬಿಜೆಪಿಯೊಂದಿಗೆ ಸೆಣಸಾಡಿ ಗೆದ್ದಿರುವ ಅವರು, ಆ ಪಕ್ಷದ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು ಚುನಾವಣೆ ಪ್ರಚಾರ ಮಾಡಬೇಕಿದೆ. ಪ್ರಬಲ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಶಾರದಮ್ಮರನ್ನು ಬೆಂಬಲಿಸಿದ್ದರು.
ಆದರೆ ಈಗ ಅವರು ಪಕ್ಷದ ನಾಯಕರ ಹೊಂದಾಣಿಕೆ ರಾಜಕಾರಣದ ಕಾರಣದಿಂದ ತಮ್ಮ ರಾಜಕೀಯ ವಿರೋಗಳೊಂದಿಗೆ ಕೈಜೋಡಿಸಬೇಕಿದೆ. ಈ ಪರಿಸ್ಥಿತಿ ಮಲೆನಾಡು ಹಾಗೂ ಮಧ್ಯಕರ್ನಾಟಕದಲ್ಲಿ ಅಳಿದುಳಿದಿರುವ ಜೆಡಿಎಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಕಾರದ ಬೆನ್ನೇರುವ ರಾಜಕಾರಣದಲ್ಲಿ ಯಾರು ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತು ಮತ್ತೆ ಮತ್ತೆ ರುಜುವಾತಾಗುತ್ತಿರುವುದು ಮಾತ್ರ ದುರಂತವೇ ಸರಿ.
ಹೆಚ್ಚಾದ ವಲಸೆ
ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಕಳಪೆ ಸಾಧನೆ ಕಂಡು ಆ ಪಕ್ಷದ ಅನೇಕರು ಕಾಂಗ್ರೆಸ್‌ನತ್ತ ವಲಸೆ ಹೋಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷಸೇರಿ ಪರಾಜಿತಗೊಂಡಿದ್ದ ಮಾಜಿ ಸಂಸದ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದ್ದಾರೆ. ಚುನಾವಣೆಗೂ ಮುನ್ನ ಮಧುಬಂಗಾರಪ್ಪ, ಆರ್.ಎಂ.ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದರು. ಇವರೆಲ್ಲರಿಗಿಂತ ಜೆಡಿಎಸ್‌ಗೆ ಎರಡು ದಶಕಗಳ ಕಾಲ ಜೀವ ತುಂಬಿದ್ದ ಎಂ.ಶ್ರೀಕಾಂತ್ ಕೂಡಾ ಪಕ್ಷ ಬಿಡುವುದಾಗಿ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶೂನ್ಯಸ್ಥಾನದಲ್ಲಿದ್ದ ಪಕ್ಷ ಸಂಘಟನೆಗೆ ಶ್ರೀಕಾಂತ್ ತನು-ಮನ=ಧನ ವ್ಯಯ ಮಾಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಕಾರ ಹಿಡಿಯುವಂತೆ ಮಾಡಿದ್ದರು. ತಮ್ಮದೇ ಶ್ರಮದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವರು ಗೆಲ್ಲುವಂತೆ ನೋಡಿಕೊಂಡಿದ್ದರು. ಪಕ್ಷದಲ್ಲಿ ಅಕಾರಕ್ಕೆ ಬಂದಾಗ ಯಾವ ಸ್ಥಾನಮಾನ ಸಿಗದೇ ಇದ್ದರೂ ದೇವೇಗೌಡರೊಂದಿಗಿರುವ ಭಾವನಾತ್ಮಕ ಸಂಬಂಧಕ್ಕೆ ಕಟ್ಟುಬಿದ್ದು ಜೆಡಿಎಸ್‌ನಲ್ಲಿ ಉಳಿದುಕೊಂಡಿದ್ದರು. ಲೋಕಸಭೆ ಚುನಾವಣೆ ಪೂರ್ವದಲ್ಲಿಯೇ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಶ್ರೀಕಾಂತ್ ಹೊರಗೆ ಬಂದಿದ್ದು, ಶಿವಮೊಗ್ಗದಲ್ಲಿ ಪಕ್ಷಕ್ಕೆ ಭಾರೀ ನಷ್ಟವಾಗಿದೆ.