ದೀರ್ಘಾಯುಷಿ ಹನುಮ ಇನಿಲ್ಲ

ದೀರ್ಘಾಯುಷಿ  ಹನುಮ ಇನಿಲ್ಲ

ಲಯನ್​ ಸಫಾರಿಯ ಮೆಚ್ಚಿನ ಹುಲಿಯಾಗಿದ್ದ ಹನುಮ ಇನ್ನಿಲ್ಲ ಎಂಬ ನ್ಯೂಸ್ ಅಲ್ಲಿಂದ ಲಭ್ಯವಾಗಿದೆ. ಆಜುಮಾಸು 20 ವರ್ಷ ವಯಸ್ಸಿನ ಹನುಮ ವಯೋಸಹಜವಾಗಿ ಸಾವನ್ನಪ್ಪಿದ್ದಾನೆ . 

ಅರಣ್ಯಾಧಿಕಾರಿಗಳು ಮುತುವರ್ಜಿ ಹಾಗೂ ಕೇರ್​ ಟೇಕರ್​ಗಳ ಅತೀವ ಕಾಳಜಿಯಿಂದ ಹನುಮ ಪ್ರತಿಯೊಂದು ನಿಭಾಯಿಸಿಕೊಳ್ಳುತ್ತಿದ್ದ. ಆತನ ಮಲಗುವ ವ್ಯವಸ್ಥೆಗಾಗಿ ವಿಶೇಷ ವ್ಯವಸ್ಥೆಯನ್ನು ಸಫಾರಿಯಲ್ಲಿ ಕಲ್ಪಿಸಲಾಗಿತ್ತು. ಅಲ್ಲದೆ ಆತ ಓಡಾಟ ಹಾಗೂ ಊಟೋಪಚಾರದ ಬಗ್ಗೆ ವಿಶೇಷ ಗಮನವಹಿಸಲಾಗಿತ್ತು

ರಾಮ, ವಾಲಿ ಮತ್ತು ಹನುಮ

ಇದರ ನಡುವೆಯು, ಹನುಮ ಇವತ್ತು ಸಾವನ್ನಪ್ಪಿದ್ದಾನೆ. ಲಯನ್​ ಸಫಾರಿಯಲ್ಲಿ ಅತಿಹೆಚ್ಚು ದಿನ ಬದುಕಿದ ಗಂಡು ಹುಲಿ ಎಂಬ ದಾಖಲೆಯನ್ನು ಹನುಮ ಬರದಿದ್ದಾನೆ. ವಾಲಿ ಹಾಗೂ ರಾಮ ಹನುಮನ ಸೋದರರು. ಈ ಎರಡು ಹುಲಿಗಳು ಮೊದಲೇ ಸಾವನ್ನಪ್ಪಿವೆ. 18 ವರ್ಷಗಳ ಕಾಲ ಅವುಗಳು ಬದುಕಿದ್ದವು.

ಲಯನ್ ಸಫಾರಿಯಲ್ಲಿ ಮತ್ತೊಂದು ಹುಲಿಯ ಸಾವು!

ಮಲೇಶಂಕರ, ಚಾಮುಂಡಿಯ ಮಗ ಹನುಮ

ಮಲೇಶಂಕರ ಹಾಗೂ ಚಾಮುಂಡಿ ನಡುವಿನ ಮೇಟಿಂಗ್​ನಿಂದಾಗಿ ರಾಮ, ವಾಲಿ, ಹನುಮ ಜನಿಸಿದ್ದವು. ಲಯನ್​ ಸಫಾರಿಯಲ್ಲಿಯೇ ಹುಟ್ಟಿದ್ದ ಇವುಗಳನ್ನ ನೋಡಲೇಂದೆ ಬೆಂಗಳೂರು ಸೇರಿದಂತೆ ವಿವಿದೆಡೆಯಿಂದ ಪ್ರವಾಸಿಗರು ಬರುತ್ತಿದ್ದರು. ಹನುಮ ತನ್ನ ಹಾವಭಾವಗಳಿಂದಲೇ ಜನರಿಗೆ ಇಷ್ಟವಾಗುತ್ತಿದ್ದ ಹಾಗೂ ಫೋಟೋಗಳಿಗೆ ಅತ್ಯದಿಕ ಪೋಸು ನೀಡುತ್ತಿದ್ದ. ಲಯನ್​ ಸಫಾರಿಯ ಆಧಾಯವನ್ನು ಹೆಚ್ಚಿಸಲು ಹನುಮ ಕೂಡ ಪ್ರಮುಖ ಕಾರಣವಾಗಿದ್ದ ಎಂಬುದು ಅಲ್ಲಿಯ ಸಿಬ್ಬಂದಿಯ ಮಾತು.

ನಾಲ್ಕಕ್ಕೆ ಇಳಿದ ಹುಲಿಗಳ ಸಂಖ್ಯೆ

ಸದ್ಯ ಹನುಮನನ್ನ ಕಳೆದುಕೊಂಡಿದ್ದಕ್ಕೆ ಅಲ್ಲಿನ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಅದನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ವಿಫಲವಾದವು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹನುಮನ ಸಾವಿನಿಂದಾಗಿ ಲಯನ್ ಸಫಾರಿಯಲ್ಲಿ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕೇವಲ ಎರಡುವರೆ ವರ್ಷದಲ್ಲಿ ರಾಮ, ವಾಲಿ, ಭರತ ಹಾಗೂ ಈಗ ಹನುಮ ಸಾವನ್ನಪ್ಪಿದೆ. ಸದ್ಯ ಲಯನ್​ ಸಫಾರಿಗೆ ಚಿರಯವ್ವನ ಹುಲಿಗಳ ಅಗತ್ಯವಿದೆ.