ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ

ಶಿಕಾರಿಪುರ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಮಧು ಬಂಗಾರಪ್ಪ

ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ

ಶಿಕಾರಿಪುರ,ಸೆ.13: ರಾಜ್ಯದಲ್ಲಿ  ಬಡವರ ಪರವಾದ ಸರ್ಕಾರವಿದ್ದರೆ ಭಾವನಾತ್ಮಕವಾಗಿ ಜನರನ್ನು  ಮರುಳು ಮಾಡಲು ಸಾಧ್ಯವಿಲ್ಲ  ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿಕಾರಿಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನಪರ ಯೋಜನೆಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷ ಅದನ್ನು ಅನುಷ್ಟಾನ ಮಾಡುವ  ಮೂಲಕ ತನ್ನ ಬದ್ಧತೆಯನ್ನು ತೋರಿಸಿದೆ. ಆದ್ದರಿಂದ ಮುಂಬರುವ ಎಲ್ಲಾ ಚುನಾವಣೆಗಳನ್ನು ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಭರವಸೆ ಇದೆ. ದೇವರಾಜ ಅರಸು, ಬಂಗಾರಪ್ಪ ರವರು ಭೂ ರೈತರಿಗೆ ಭೂಮಿ ಕೊಟ್ಟರು, ಉಚಿತ ವಿದ್ಯುತ ಕೊಟ್ಟರು, ರೈತರಿಗೆ ಹಕ್ಕು ಪತ್ರ ಕೊಟ್ಟರು, ಅವರ ಕೆಲಸಗಳಿಂದಾಗಿಯೇ ಇಂದು ಅವರು ಎಂದಿಗೂ ಜನರ ಮನಸ್ಸಿನಲ್ಲಿರುತ್ತಾರೆ ಎಂದರು.

ಶಿಕಾರಿಪುರ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಕಾಂಗ್ರೆಸ್ ಅವಯಲ್ಲಿಯೇ ಆರಂಭವಾಗಿದ್ದವು, ತದ ನಂತರ ಬಂದವರು, ಅನುದಾನ ನೀಡಿ ಜಾರಿಗೊಳಿಸಿದ್ದಾರೆ . ಇನ್ನೂ ಆಗಬೇಕಿರುವ ಕಾಮಗಾರಿಯನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು.

ಶಿಕಾರಿಪುರ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿದ್ದು, ಈಗ ಎಲ್ಲಾ ಬಗೆಹರಿದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಕಾರದಲ್ಲಿದ್ದು ಶಿಕಾರಿಪುರ ದಲ್ಲಿ ಕಾಂಗ್ರೆಸ್ ಮುಖಂಡರ ಮಾತುಗಳಿಗೆ ಮನ್ನಣೆ ಸಿಗಲಿದೆ. ಇಲ್ಲಿ ನಿಮ್ಮದೇ ಸರ್ಕಾರ ವಿದ್ದು, ನೀವೆ ನನಗೆ ಮಾಡಿದ ಅಭಿನಂದನೆ ನಿಮಗೆ ಸಲ್ಲಬೇಕು. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜಯ ನಿಶ್ಚಿತ ಎಂದು ಹೇಳಿದರು.

ತಂದೆಯವರು ಶಿಕಾರಿಪುರ ಮತ್ತು ಸೊರಬ ಎರಡೂ ಕ್ಷೇತ್ರಗಳನ್ನು ಎರಡೂ ಕಣ್ಣುಗಳಂತೆ ನೋಡುತ್ತಿದ್ದರು, ನನಗೂ ಕೂಡ ಈ ಎರಡೂ ಕ್ಷೇತ್ರಗಳ ಬಗ್ಗೆ ಅದೇ ಭಾವನೆ ಇದೆ. ಯಾವುದೇ ಕೆಲಸವಾಗ ಬೇಕಾದರೂ ನೇರವಾಗಿ ಬನ್ನಿ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ   ಮಾತನಾಡಿ, ಮಧು ಬಂಗಾರಪ್ಪ ಅವರ ಪಾದಯಾತ್ರೆ ಫಲ ಕೆರೆತುಂಬಿಸುವ ಯೋಜನೆ, ಸಮ್ಮಿಶ್ರ ಸರಕಾರ  ಇರುವಾಗ ಮಾಡಿದ ಕೆಲಸ ಜನರ ನೆನಪಿನಲ್ಲಿದೆ. ಈಗ ಶಿಕಾರಿಪುರದಲ್ಲಿ ನಕಲಿ ಹುಲಿಗಳು ಸುಳ್ಳು ಹೇಳುತ್ತಾ ಕಾಲ ಕಳೆಯುತಿದ್ದಾರೆ. ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಸುಂದರೇಶ್ ಹೆಚ್.ಎಸ್. ಮಾತನಾಡಿ, ಹಾಲು ನೀರು, ಸಂಗಮದಂತೆ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ  ಮಾಡಲು ಸಾಧ್ಯವಾಗಿಲ್ಲ ಎಂದರು. 

ಜನ ಸಾಮಾನ್ಯರ ಬಡವರ ಬದುಕಿಗೆ ಭದ್ರತೆ, ಮಹಿಳೆಗೆ ಹಣ, ಎರಡು ಸಾವಿರ ರೂ.ವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.ಇದರಿಂದ  ಬಿಜೆಪಿಗೆ ಭಯ ಉಂಟಾಗಿದೆ.ಇದ್ದಕ್ಕಾಗಿ ಇನ್ನೊಬ್ಬರ ಸಹಾಯ (ಜೆಡಿಎಸ್), ಪಡೆದುಕೊಳ್ಳುವ ಮೂಲಕ  ಕುರುಡನ ಹೆಗಲ ಮೇಲೆ ಕುಂಟ ಕುಂತಂತೆ ಆಗಿದೆ ಎಂದು ಆಯನೂರು ಮಂಜುನಾಥ್ ಹೇಳಿದರು. 

ನಾಗರಾಜ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಕಲೇಶ, ಬಲ್ಕೀಶ್ ಬಾನು, ರಮೇಶ್, ಆರ್ ಪ್ರಸನ್ನ ಕುಮಾರ್, ಆರ್ ಎಂ ಮಂಜುನಾಥ್ ಗೌಡ, ಎಸ್.ಕೆ. ಮರಿಯಪ್ಪ, ನಗರದ ಮಹಾದೇಪ್ಪ, ಕಲಗೋಡು ರತ್ನಾಕರ್ ಇತರರು ಉಪಸ್ಥಿತರಿದ್ದರು.

ಗಂಡುಗಲಿ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ಮಂತ್ರಿಆಗಿದ್ದಾರೆ. ಇನ್ನು ಯಾರಿಗೂ ಹೆದರೊ ಅಗತ್ಯ ಇಲ್ಲ. ಶಿಕಾರಿಪುರ ಕಾಂಗ್ರೆಸ್ ವಿಜೃಂಭಿಸುತ್ತದೆ.

- ಗೋಣಿ ಮಾಲತೇಶ್, ಪರಾಜಿತ ಅಭ್ಯರ್ಥಿ