ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶದಲ್ಲಿ ಪುನೀತ್ ಭಾವಚಿತ್ರ, ಕನ್ನಡ ಧ್ವಜ ಹಾರಿಸಿದ ಶಿವಮೊಗ್ಗ ಯುವಕರು

ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶದಲ್ಲಿ ಪುನೀತ್ ಭಾವಚಿತ್ರ, ಕನ್ನಡ ಧ್ವಜ ಹಾರಿಸಿದ ಶಿವಮೊಗ್ಗ ಯುವಕರು

ಶಿವಮೊಗ್ಗ: ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶವಾಗಿರುವ ಭಾರತದ ಖರದುಂಗ್ಲಾ(17982  ಅಡಿ) ದಲ್ಲಿ ಅಪ್ಪುವಿನ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ.

ಪ್ರಸ್ತುತ ಲಡಕ್ ಪ್ರವಾಸದಲ್ಲಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರ ಪ್ರದೇಶದಲ್ಲಿ ಹಾರಿಸುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದರು.

ಈ ಬಗ್ಗೆ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ ಮಾತನಾಡಿ, ’ಅಪ್ಪು ಕೇವಲ ಕರ್ನಾಟಕದ ಜನರ ಪ್ರೀತಿಯನ್ನು ಮಾತ್ರವಲ್ಲದೇ ಜಗತ್ತಿನ ಎಲ್ಲಾ ದೇಶಗಳ ಜನರ ಪ್ರೀತಿ ಗಳಿಸಿದ್ದರು. ಅವರ ನೆನಪು ಇಂದಿಗೂ ದೂರವಾಗುತ್ತಿಲ್ಲ. ಹಾಗಾಗಿಯೇ ನೆಚ್ಚಿನ ನಾಯಕನ ಚಿತ್ರವನ್ನು ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರಿಸಬೇಕು ಎಂದು ಸ್ನೇಹಿತರೆಲ್ಲರೂ ಸೇರಿ ಈ ಪ್ರವಾಸ ಕೈಗೊಂಡಿದ್ದೇವೆ’ ಎಂದರು.