ಜಂಭರಘಟ್ಟ ದ ಪಾಳು ಜಾಗವನ್ನು ಬಡವರಿಗೆ ನಿರ್ಗತಿಕರಿಗೆ ಹಂಚಿ

ಜಂಭರಘಟ್ಟ ದ  ಪಾಳು ಜಾಗವನ್ನು ಬಡವರಿಗೆ ನಿರ್ಗತಿಕರಿಗೆ ಹಂಚಿ
ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿ ಜಂಬರಘಟ್ಟ ಗ್ರಾಮದ ಸರ್ವೆ ನಂ.97 ರ ವಿಸ್ತೀರ್ಣ 138 ಎಕರೆ ಜಮೀನನ್ನು ನಿವೇಶನ ರಹಿತರಿಗೆ ನೀಡುವಂತೆ ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ಒತ್ತಾಯಿಸಿದೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿ  ಎದುರು ಪ್ರತಿಭಟನೆ ನಡೆಸಿದ ಸೇನೆಯ ಪದಾಧಿಕಾರಿಗಳು,  ಬಡವರು, ವಿಧವೆಯರು, ಅಂಗವಿಕಲರು , ಮಂಗಳಾಮಖಿಯರು ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗದವರು,  ಅಲ್ಪಾಸಂಖ್ಯಾತರು ಹಾಗೂ ಅಲೆಮಾರಿ ಸಮುದಾಯ ಜನಾಂಗದವರು ನಿರಾಶ್ರಿತರು ಮತ್ತು ನಿರ್ಗತಿಕರಿಗೆ , ಹೋಬಳಿ ಯಗ್ರಾಮ ಪಂಚಾಯತಿಗಳ ಅಸಹಾಯಕರಿಗೆ, ಆಶಕ್ತರಿಗೆ ಅನುಕೂಲವಾಗುವಂತೆ ನಿವೇಶನವನ್ನು ಮೀಸಲಿಡಲು  ಆಗ್ರಹಿಸಿದರು. 
 ಈ  ಜಮೀನು ದನಗಳಿಗೆ ಮುಫತ್ತು ಜಮೀನಾಗಿದ್ದು, ಸುಮಾರು ವರ್ಷಗಳ ಹಿಂದೆ ಕಲ್ಲು ಕೋರೆಯಾಗಿತ್ತು. 
  ಇದರಿಂದ ಪರಿಸರಕ್ಕೆ ಹಾನಿಯಾಗಿರುವ ಈ ಜಾಗವನ್ನು ಅರಣ್ಯ ಅಧಿಕಾರಿ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸರ್ವೆ ಮಾಡಬೇಕೆಂದು ಒತ್ತಾಯಿಸಿದರು. 
ಕೋರಿದೆ. 
ಈಗ ಜಾಗವು  ಪಾಳು ಬಿದ್ದಿದ್ದು,  ತಾಲ್ಲೂಕಿನ ಅಕ್ಕ-ಪಕ್ಕದ ಹೋಬಳಿಯ ಪ್ರತಿ ಗ್ರಾಮ ಪಂಚಯತಿಯ ಗ್ರಾಮಗಳಲ್ಲಿ ಎಲ್ಲಾ ತರಹದ ಅಶಕ್ತರು ಬಡವರಿಗೆ  ಹಂಚಬೇಕೆಂದು ಮನವಿ ಸಲ್ಲಿಸಿದೆ. 
 ಈ ಸಂದರ್ಭದಲ್ಲಿ  ಸೇನೆಯ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ, ಕಾರ್ಯಕರ್ತರಾದ ಕೆ. ಬಿ. ರಾಮಚಂದ್ರಪ್ಪ, ಉಷಾ, ಸರೋಜಾ, ಟಿಪ್ಪುಸಾಬ್ ಮೊದಲಾದವರಿದ್ದರು.