ಚಲಿಸುತ್ತಿದ್ದ ಬಸ್‌ನಿಂದ ಹಾರಿ ಆತ್ಮಹತ್ಯೆ

ಚಲಿಸುತ್ತಿದ್ದ ಬಸ್‌ನಿಂದ ಹಾರಿ ಆತ್ಮಹತ್ಯೆ

ಶಿವಮೊಗ್ಗ:  ಮಾನಸಿಕ ಖಿನ್ನತೆಗೆ ಚಿಕಿತ್ಸೆಗೆಂದು ತರಿಕೆರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ  ವ್ಯಕ್ತಿಯೊಬ್ಬ ಮರಳಿ ಹೋಗುವಾಗ ಕೆಎಸ್ಸಾರ್ಟಿಸಿ ಬಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ಬಳಿ ಗುರುವಾರ ಸಂಜೆ ಸಂಭವಿಸಿದೆ.

 ತರಿಕೆರೆ ತಾಲೂಕಿನ ಮಿಳ್ಳೇನಹಳ್ಳಿ ವಾಸಿ ನಂದೀಶ (35 ) ಆತ್ಮಹತ್ಯೆ ಮಾಡಿಕೊಂಡವನು. ಶಿವಮೊಗ್ಗದಿಂದ ಬಸ್ಸನ್ನೇರಿದ್ದ ಈತ ಭದ್ರಾವತಿಯ ವೀರಾಪುರ ಕ್ರಾಸ್ ಬಳಿ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಬಸ್‌ನಿದ ಹಾರಿದ್ದಾನೆ. ಆತ್ಮಹತ್ಯೆಯ ಉದ್ದೇಶದಿಂದಲೇ ಹಾರಿದ್ದಾನೆ ಎನ್ನಲಾಗಿದೆ. ಆದರೆ ಇದು ಚಾಲಕ ಆತ ಬಸ್‌ನ್ನು ನಿಲ್ಲಿಸದೆ ಮುಂದೆ ಸಾಗಿದ್ದಾನೆ. 

ಸ್ನೇಹಿತನು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು.

ಆದರೆ ತಾನು ಚಿಕಿತ್ಸೆ ಪಡೆಯುವುದಿಲ್ಲ ಎಂದು ಆಸ್ಪತ್ರೆ ಬಳಿ ನಂದೀಶ್ ಹಠ ಹಿಡಿದಿದ್ದನು. ಇದರಿದಂ ಚಿಕಿತ್ಸೆ ಪಡೆಯದೆ ವಾಪಸಾಗಿದ್ದರು. ಘಟನೆ ನಂತರ  ಶವವನ್ನು ಭದ್ರಾವತಿ ಸರಕಾರಿ ಆಸ್ಪತ್ರೆಗೆ ತರಲಾಯಿತು.