*ಕನ್ನಡ ಚಿತ್ರರಂಗ ಚುಕ್ಕಾಣಿಯಿಲ್ಲದ ಹಡಗು*

*ಕನ್ನಡ ಚಿತ್ರರಂಗ ಚುಕ್ಕಾಣಿಯಿಲ್ಲದ ಹಡಗು*

ಮೈಸೂರು,ಸೆ.12: ಕನ್ನಡ ಚಲನಚಿತ್ರರಂಗ ಚುಕ್ಕಾಣಿ ಇಲ್ಲದ ಹಡಗಿನಂತಾಗಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಕನ್ನಡದಲ್ಲಿ 250 ಜನ ಹೊಸ ನಿರ್ದೇಶಕರು, 500 ಹೊಸ ನಿರ್ಮಾಪಕರಿದ್ದಾರೆ. ಇವgರಿಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪರ್ಕವೇ ಇಲ್ಲ. ಇವರೆಲ್ಲರನ್ನೂ ಕರೆದು ಮಾತನಾ ಡುವವರೇ ಮಂಡಳಿಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಯಾರಾದರೂ ಮಂಡಳಿಯ ಚುಕ್ಕಾಣಿ ಹಿಡಿಯಬೇಕು ಎಂದರು.

ಮಹನೀಯರು ಕಟ್ಟಿದ ಚಲನಚಿತ್ರ ವಾಣಿಜ್ಯ ಮಂಡಳಿಯು ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರನ್ನು ಒಟ್ಟಿಗೆ ನೋಡುತ್ತಿತ್ತು. ಪ್ಯಾನ್ ಇಂಡಿ ಯಾದ ವ್ಯಾಪಾರದ ಸೋಗಿನಿಂದ ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ. ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನಿಟ್ಟುಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ ಎನ್ನುವ ದೊಡ್ಡ ತಾಪತ್ರಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.