ಇದಾವುದು ಹೊಸ ಧರ್ಮ

ಬೆಂಗಳೂರು,ಸೆ.6 : ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದಿರುವ ಅಯೋಧ್ಯೆ ಸ್ವಾಮಿ ವಿರುದ್ಧ ನಟ ಕಿಶೋರ್ ಕುಮಾರ್ ಕಿಡಿ ಕಾರಿದ್ದಾರೆ.
ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವ ರಾಗೋಣ. ವಿಶ್ವಮಾನವರಾ ಗೋಣ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಇಷ್ಟೂ ದಿನ ಹಿಂದೂ ಹಿಂದೂ ಎಂದು ಅರಚುತಿದ್ದವರೆಲ್ಲ ಯಾಕೋ ಆ ಪದ ಬಿಟ್ಟೇ ಬಿಟ್ಟರೆನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಾಗಾದರೆ ನಾವು ಹಿಂದೂಗಳಲ್ಲವೇ ಎಂದು ಕೇಳಿರುವ ಅವರು, ಇದಾವುದು ಹೊಸ ಧರ್ಮ ಸನಾತನ ಎಂದು ಪ್ರಶ್ನಿಸಿದ್ದಾರೆ.