ಅಪ್ರಾಪ್ತ ಬಾಲಕಿಗೆ ನಿರಂತರ ಲೈಂಗಿಕ ದೌರ್ಜನ್ಯ: ಯುವಕ ಸೆರೆ

ಶಿವಮೊಗ್ಗ,ಆ.22: ಯುವಕನೊಬ್ಬ ಒಂದು ತಿಂಗಳಿನಿಂದ ಅಪ್ರಾಪ್ತ ವಯಸ್ಸಿನ ಬಾಲಕಿ  ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಘಟನೆ   ಶಿರಾಳಕೊಪ್ಪದಲ್ಲಿ ಬೆಳಕಿಗೆ ಬಂದಿದ್ದು ಈಗ ಆತನನ್ನು ಬಂಸಲಾಗಿದೆ. 

ಶಿರಾಳಕೊಪ್ಪದ  ಅಜ್ಮತ್ ಉಲ್ಲಾ ಎಂ. ಅಲಿಯಾಸ್ ಇಬ್ಬು (23) ಈ ಕೃತ್ಯ ಎಸಗಿದವನು. ಆತನ ಮೇಲೆ ಪೋಕ್ಲೋ ಕಾಯಿದೆಯಡಿ  ಕೇಸು  ದಾಖಲಾಗಿದೆ. ಬಾಲಕಿಗೆ ವಿವಿಧ ಆಮಿಷಗಳನ್ನು ಒಡ್ಡಿ ಆಕೆಯನ್ನು ಪುಸಲಾಯಿಸಿ ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳುತಿದ್ದ ಎಂದು ಗೊತ್ತಾಗಿದೆ.

ಸಾಕಷ್ಟು ಲೈಂಗಿಕ ಅರಿವು ಇಲ್ಲದ ಬಾಲಕಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆಗ ವಿಚಾರಿಸಿದಾಗ ನಿರಂತರವಾಗಿ   ನಡೆಯು ತ್ತಿರುವ ದೌರ್ಜನ್ಯ ಬೆಳಕಿಗೆ ಬಂದಿದೆ.

ಶಿರಾಳಕೊಪ್ಪ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ. ಆತನ ಮೇಲೆ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಮತ್ತು ಪೋಕ್ಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.